ಸುಮ್ಮನೆ ನನಗೆ ಅನ್ನಿಸಿದ್ದು, ಸುತ್ತಮುತ್ತ ಕಂಡ ಸುದ್ದಿ, ವಿಷಯ, ಹರಟೆ, ತಂತ್ರಜ್ಞಾನ ಇತರ ಮಾಹಿತಿಯನ್ನು ಓಟ್ಟಿಗೆ ಒಂದು ಕಡೆ ಇಡೋ ಪ್ರಯತ್ನವೇ ಈ ಬ್ಲಾಗ್. ಏಕೆಂದರೇ, ನಾವು ಇರೋದೇ ಹೀಗೇ... ನೀವು???

Wednesday, September 12, 2007

ಅಂತರ್ಜಾಲದಲ್ಲಿ ಕನ್ನಡದ ಗೀತೆಗಳ ಸಾಹಿತ್ಯ

ಕನ್ನಡದ ಗೀತೆಗಳ ಸಾಹಿತ್ಯವನ್ನು ಅಂತರ್ಜಾಲದಲ್ಲಿ ಹುಡುಕುತ್ತಿದ್ದರೆ, ಇದಕ್ಕೆ ಸೂಕ್ತವಾದ ಸ್ಥಳ: ಕನ್ನಡಲಿರಿಕ್ಸ್.ಕಾಂ. ಅದ್ಭುತವಾದ ಕೆಲಸವನ್ನು ಈ ಅಂತರ್ಜಾಲದ ನಿರ್ಮಾಪಕ/ನಿರ್ವಾಹಕರು ಹಾಗೂ ಹಾಡುಗಳನ್ನು ಸೇರಿಸುವ ಕೆಲಸವನ್ನು ಸಾಹಿತ್ಯ ಅಭಿಮಾನಿಗಳು ಮಾಡುತ್ತಿದ್ದಾರೆ. ಇಲ್ಲಿ ನೀವು ಚಲನಚಿತ್ರ, ಕವನ, ಜನಪದ, ಶಾಸ್ತ್ರೀಯ ಹಾಗೂ ಭಕ್ತಿಗೀತೆಗಳ ಸಾಹಿತ್ಯವನ್ನು ಹುಡುಕಬಹುದು.

ಉತ್ತಮ ಕೆಲಸಕ್ಕೆ ಆತ್ಮೀಯ ವಂದನೆಗಳು.

ಕನ್ನಡದಲ್ಲಿ ಪಾಡ್‍ಕ್ಯಾಸ್ಟಿಂಗ್

’ಧರ್ಮಸೆರೆ’ ಚಿತ್ರದ ’ಈ ಸಂಭಾಷಣೆ’ ಹಾಡನ್ನು ಅಂತರ್ಜಾಲದಲ್ಲಿ ಹುಡುಕಿದ್ದಾಗ ಸಿಕ್ಕಿದ್ದು ಮಧು ರಾವ್‍ರವರ ಪಾಡ್‍ಕ್ಯಾಸ್ಟಿಂಗ್ ಸೈಟ್. ಓಳ್ಳೆಯ ದ್ವನಿ, ಕರೋಕೆ, ಸಾಹಿತ್ಯ ಮತ್ತು ಸಂಯೋಜನೆ. ನಿಜಕ್ಕೂ ಸೋಗಸಾಗಿ ಬಂದಿದೆ. ತುಂಬಾ ದಿನದಿಂದ ಹುಡುಕುತ್ತಿದ್ದ ಈ ಹಾಡು ಸಿಕ್ಕಿತು.


ಹಾಗೆಯೇ ಸೌಮಿತ್ರ ಮತ್ತು ವಿದ್ಯು ಹಾಡಿರುವ ಹಲವು ಕನ್ನದ ಹಾಡುಗಳು ಸೊಗಸಾಗಿ ಬಂದಿವೆ. ಇನ್ನೂ ಹೆಚ್ಚಚ್ಚು ಹಾಡುಗಳು ಅಂತರ್ಜಾಲದಲ್ಲಿ ಪಾಡ್‍ಕ್ಯಾಸ್ಟಿಂಗ್ ರೂಪದಲ್ಲಿ ಸಿಗಲಿ.